Welcome, Guest   [ Register | Sign In | Take a tour | Adult Filter: On ]

ಗುರು ಶಿಷ್ಯರು ಶತ್ರುಗಳಾದಾಗ....

ದೇವೇಗೌಡ ಮತ್ತು ಸಿದ್ರಾಮಯ್ಯ ಅವರು ಒಂದು ಕಾಲದಲ್ಲಿ ಗುರು ಶಿಷ್ಯರಾಗಿದ್ದರು. ಆಗಿನ ಸಮಯದಲ್ಲಿ ದೇವೇಗೌಡರ ಬಲಗೈಯಂತೆ ಸಿದ್ರಾಮಯ್ಯ ನವರು ಕಾರ್ಯ ಮಾಡುತ್ತಿದ್ದರು. ದೇವೇ ಗೌಡರ ನಂತರ 2 ನೇ ಸ್ಥಾನ ಸಿದ್ರಾಮಯ್ಯನವರದಾಗಿತ್ತು. ಆಗ ದೇವೇಗೌಡರ ಮಕ್ಕಳಾದ ರೇವಣ್ಣ ಮತ್ತು ಕುಮಾರಸ್ವಾನಿ ಸಿದ್ರಾಮಯ್ಯನವರನ್ನು ಬಾಯಿ ತುಂಬ ಸಿದ್ರಾಮಣ್ಣ ಎಂದೇ ಕರೆಯುತ್ತಿದ್ದರು,
ಆದರೆ 2004 ರ ವಿಧಾನ ಸಭೆಯ ಚುನಾವಣೆ ಯಲ್ಲಿ ಯಾವುದೆ ಒಂದು ಪಕ್ಷ ನಚ್ಚಳ ಬಹುಮತವನ್ನು ಗಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ ಎರಡು ಕೂಡಿದರೆ ಮಾತ್ರ ಸರಕಾರ ರಚಿಸಲು ಸಾಧ್ಯವಾಗುತ್ತದೆ. ಎಂಬ ವಾತಾವರಣ ಆಗ ನಿರ್ಮಾಣ ಗೊಂಡಿತು.
ಆಗ ದೇವೇಗೌಡರು ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸರಕಾರ ರಚಿಸಲು ಮುಂದಾದರು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯ ಮಂತ್ರಿ ಸ್ಥಾನವನ್ನು ನೀಡಿ ತಮ್ಮ ಪಕ್ಷದವರೊಂದಿಗೆ ಉಪ ಮುಖ್ಯ ಮಂತ್ರಿ ಸ್ಥಾನ ತೆಗೆದುಕೊಳ್ಳಲು ದೇವೇಗೌಡರು ಒಪ್ಪಿಕೊಂಡರು.
ಅದರಂತೆ ಕಾಂಗ್ರೆಸ್ ಪಕ್ಷದ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿ ಜೆಡಿಎಸ್ ಪಕ್ಷದ ಸಿದ್ರಾಮಯ್ಯನವರು ಉಪ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು.
ಆದರೆ ಆಗ ಸಿದ್ರಾಮಯ್ಯನವರ ಮನಸ್ಸಿನಲ್ಲಿ ದೇವೇಗೌಡರು ಪಟ್ಟು ಹಿಡಿದಿದ್ದರೆ ಮುಖ್ಯ ಮಂತ್ರಿಯ ಸ್ಥಾನ ತಮಗೆ ಬರುತ್ತಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರು ಆ ಕಾರ್ಯ ಮಾಡಲಿಲ್ಲ. ಎಂಬ ಭಾವನೆಗಳಿ ಉಂಟಾಗಿದ್ದರಿಂದ ದೇವೇಗೌಡ ಹಾಗೂ ಸಿದ್ರಾಮಯ್ಯನವರ ನಡುವೆ ಮೆಲ್ಲ ಮಲ್ಲನೇ ವಿರಸ ಆರಂಭವಾ ಯಿತು. ಸಿದ್ರಾಮಯ್ಯನವರು ಅಹಿಂದ ಸಂಘಟನೆಯ ಕಾರ್ಯದಲ್ಲಿ ತೊಡಗಿ ಕೊಂಡಾಗ ಇದು ತಾರಕಕ್ಕೆ ಹೋಯಿತು. ನಂತರ ಸಿದ್ರಾಮಯ್ಯನವರನ್ನು ತೆಗೆದು ಹಾಕಿ ಅವರ ಸ್ಥಾನದಲ್ಲಿ ಎಂ.ಪಿ. ಪ್ರಕಾಶ ಅವರನ್ನು ಉಪ ಮುಖ್ಯ ಮಂತ್ರಿಯನ್ನಾಗಿ ಮಾಡಿದ ನಂತರ ಸಿದ್ರಾಮಯ್ಯನವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು. ಆಗ ಮತ್ತೆ ದೇವೇಗೌಡರ ಹಾಗೂ ಸಿದ್ರಾಮಯ್ಯನವರ ನಡುವೆ. ವಿರಸ ಹೆಚ್ಚಾಗುತ್ತಲೇ ಹೋಯಿತು.
ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿ ದೆಹಲಿಗೆ ಹೋದ ನಂತರ ಜೆಡಿಎಸ್ ಶಾಸಕಾಂಗ ನಾಯಕರಾಗಿ ಎಚ್. ಡಿ. ರೇವಣ್ಣ ನೇಮಕ ಗೊಂಡ ನಂತರ ನಡೆದ ವಿಧಾನ ಸಭಾ ಸಧಿವೇಶನಗಳಲ್ಲಿ ಸಿದ್ದರಾಮಯ್ಯ ಮತ್ತು ರೇವಣ್ಣ ಒಟ್ಟಿಗೆ ಕಾರ್ಯವನ್ನು ಮಾಡಿದರು. ಆದರೆ ಇತ್ತೀಚೆಗೆ ನಡೆದ ಆರು ದಿನಗಳ ವಿಶೇಷ ಅಧಿವೇಶನದಲ್ಲಿ ಎಚ್,. ಡಿ. ರೇವಣ್ಣ ಅವರು ಕಲ್ಲಿದ್ದಲು ಖರೀದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ಆ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ನಡೆಯಬೇಕು. ಎಂದು ಪಟ್ಟು ಹಿಡಿದಾಗ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ರೇವಣ್ಣನವರಿಗೆ ಬೆಂಬಲ ನೀಡದೇ ರಾಜ್ಯದಲ್ಲಿ ಉಂಟಾದ ಬಜ ಪರಿ ಪರಿಸ್ಥಿಯ ಕುರಿತು ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು. ಅಧಿವೇಶನಮುಗಿದ ನಂತರ ಈ ವಿಷಯವನ್ನು ಪತ್ರಿಕಾ ಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಎಚ್. ಡಿ. ಕುಮಾರ ಸ್ವಾಮಿ ಅವರು ಕಾಂಗ್ರೆಸ್ದವರು ಭಾಜಪದವ ರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಕಾಂಗ್ರಸ್ದವರು ಕಲ್ಲಿದ್ದಲು ಅಕ್ರಮದ ಚರ್ಚೆಗಾ ಆಗ್ರ ಪಡಿಸಲಿಲ್ಲ ಎಂದು ಆಪಾದಿಸಿ ದರು ಇದಕ್ಕೆ ಉತ್ತರ ನೀಡಿದ ಸಿದ್ರಾಮಯ್ಯನವರು ನಮಗೆ ಒಳ ಒಪ್ಪಂದ ಮಾಡಿಕೊಳ್ಲೂವ ಚಾಳಿ ಇಲ್ಲ ಅದು ದೇವೇಗೌಡರ ಕುಟುಂಬದವರಿಗೆ ಮಾತ್ರ ಗೊತ್ತು. ಎಂದು ಕುಮಾರ ಸ್ವಾಮಿಯ ವರಿಗೆ ತಿರುಗೇಟು ನೀಡಿದರು. ಆಗ ದೇವೇಗೌಡರು ಸಿದ್ರಾಮಯ್ಯ ನನ್ನ ವಯಸಿಗಾದರೂ ಬೆಲೆ ಕೊಡಬೇಕು. ಎಂದಾಗ ದೆವೇಗೌಡರು ಮಾನಸಿಕವಾಗಿ ಚೆನ್ನಾಗಿ ಇರಬೇಕು.. ಅಂದರೆ ಅವರಿಗೆ ಬೆಲೆ ಕೊಡಲು ಸಾಧ್ಯವಾಗುತ್ತದೆ. ಮೊದಲು ಅವರು ತಮ್ಮ ಮಕ್ಕಳಿಗೆ ಸರಿಯಾಗಿ ಇರಲು ಹೇಳಬೇಕು. ಅಂದರೆ ಮಾತ್ರ ಎಲ್ಲವೂ ಸರಿಯಾಗುತ್ತದೆ. ಎಂದು ಹೇಳಿದ್ದಾರೆ. ಹೀಗಾಗಿ ಈಗ ಮತ್ತೆ ಗೌಡರ ಮತ್ತು ಸಿದ್ರಾಮಯ್ಯನವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ದೇವೇಗೌಡರು ಹೇಗೆ ಇದ್ದಾರೆ ಎಂಬುದು ಸಿದ್ರಾಮಯ್ಯನವರಿಗೆ ಗೊತ್ತಿದೆ. ಸಿದ್ರಾಮಯ್ಯನವರು ಹೇಗೆ ಇದ್ದಾರೆ ಎಂಬುದು ದೇವೆ ಗೌಡರಿಗೆ ಗೊತ್ತಿದೆ. ಹೀಗಾಗಿ ಅವರ ಮಾತಿನ ಚಕಮಕಿ ಯಾವಾಗಲೂ ರಂಗಿನಿಂದ ಕೂಡಿರುತ್ತದೆ. ಆದರೆ ಕುಮಾರ ಸ್ವಾಮಿ ದೇವೇಗೌಡರು ಸಿದ್ರಾಮಯ್ಯನ ವರನ್ನು ಟೀಕಿಸಿದರೆ ರೇವಣ್ಣ ಮಾತ್ರ ಈಗಲೂ ಸಿದ್ರಾಮಯ್ಯನ ವರ ಜೊತೆಗೆ ಉತ್ತಮ ಸಂಬಂಧ ವನ್ನು ಹೊಂದಿದ್ದಾರೆ ಇಗಲೂ ಅವರು ಸಿದ್ರಾಮಯ್ಯನವರನ್ನು ಬಾಯಿತುಂಬ ಸಿದ್ರಾಮಣ್ಣ ಎಂದೇ ಕರೆಯುತ್ತಾರೆ. ವಿಧಾನ ಮಂಡಳ ಅಧಿವೇಶನ ಇದ್ದಾಗ ಅವರಿಬ್ಬರು ಒಂದೇ ಕಡೆಗೆ ಕುಳಿತು ಊಟ ಮಾಡುತ್ತಾರೆ. ಆದರೆ ಕುಮಾರಸ್ವಾಮಿ ಮಾತ್ರ ಸದಾಕಾಲ ಸಿದ್ರಾಮಯ್ಯನವರಿಂದ ದೂರ ಇರುವ ಕಾರ್ಯವನ್ನು ಮಾಡುತ್ತಾರೆ. ಈಗ ಉಂಟಾದ ಈ ಹೊಸ ಜಗಳ ಯಾವ ರೀತಿಯಲ್ಲಿ ಅಂತ್ಯ ಗೊಳ್ಳುತ್ತದೆ. ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಈ ರೀತಿಯಾಗಿ ಒಂದು ಕಾಲದಲ್ಲಿ ಗುರು ಶಿಷ್ಯರಾಗಿದ್ದ ದೇವೇಗೌಡರು ಹಾಗೂ ಸಿದ್ರಾಮಯ್ಯ ಮತ್ತೆ ಒಂದಾದರೆ ಅಚ್ಚರಿ ಪಡಬೇಕಾದ ಕಾರಣ ಇರುವುದಿಲ್ಲ.
ಹಕ್ಕು ನಿರಾಕರಣೆ