ತುಂಬಾ ಚನ್ನಾಗಿತ್ತು. ಪಾತ್ರಕ್ಕೆ ದಿಗಂತನ ಬಿಟ್ಟು ಗಣೇಶನ ಹಾಕಿದ್ರೆ ಇನ್ನು ಚನಾಗಿರ್ತಿತ್ತು. ಅನಿಸಿತ್ತು. ಏಕೆಂದರೆ ಅಂತಹ ಪಾತ್ರಗಳಲ್ಲಿ ಗಣೇಶನ ನೋಡಿ ನೋಡಿ ಅದಕ್ಕೆ ಅಡ್ಜಸ್ಟ ಆಗ್ಬಿಟಿದಿವಿ. ಆದರೆ ಗಣೇಶನಿಗೆ ಆತರಹದ ಟ್ರೇಂಡ್ ಒದಗಿಸಿದವರೆ ಭಟ್ಟರಲ್ವೆ. ಅಷ್ಟಕ್ಕೂ ಈ ಸಿನೆಮಾ ಕೂಡ ಅವರ ನಿರ್ದೇಶನದಡಿಯಲ್ಲಿ ಬಂದದ್ದೆ ತಾನೇ...
ಇರಲಿ ಈಗ ವಿಷಯಕ್ಕೆ ಬರೋಣ ಮುಂಗಾರು ಮಳೆ ನಂತರ ಈ ಟ್ರೆಂಡ ಕ್ರಿಯೆಟ್ ಮಾಡಿದವರೆ ಯೋಗರಾಜ ಭಟ್ಟರು. ಅಷ್ಟಕ್ಕೂ ಈ ಟ್ರೆಂಡ ಯಾವುದಂತೀರ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳಲ್ಲಿ ಹಿರೋನ ತುಂಬಾ ಸಿಂಪಲ್ ಆಗಿ ತೊರಸ್ತಾರೆ. ಹಿರೋ ಹಿರೋಯಿನ್ ನಡುವೆ ಪ್ರೀತಿ ಮೂಡಿದರೆ ಹಿರೋನ ತಂದೆಯೋ ಅಥವಾ ಹಿರೋಯಿನ್ ತಂದೆಯೋ ವಿಲನ್ ಆಗಲ ಅಂದರೆ ಅವರ ಮಧ್ಯೆ ಸಮಸ್ಯೆ ಇರಲ್ಲ ಅಂತಲ್ಲ. ಆದರೆ ಅವರು ತಮ್ಮದೇಯಾದ ಸಮಸ್ಯೆಗಳಿಂದ ಪ್ರೀತಿಗೆ ಅಡಿ. ಇದೇ ಕಣ್ರೀ ಈಗಿನ ಹುಡುಗರಿಗೆ ಇಷ್ಟ ಆಗೊದು. ಅಶ್ಲೀಲ ದೃಶಗಳಿರುವುದಿಲ್ಲ. ವಿಪರೀತ ತಲೆ ಚಿಟ್ಟ... ಹಿಡಿಸೋ ಫೈಟ್ ಸಿನಗಳಿರುವುದಿಲ್ಲ. ಮನೆಮಂದಿಕುಳಿತು ನೋಡೊ ಸಿನೆಮಾಗಳೆಂದರೆ ಇಂತಹವೇ ಇನೋ ಒಟ್ಟಾರೆ ಕನ್ನಡ ಚಿತ್ರರಂಗಕ್ಕೊಂದು ಇಂತಹ ಟ್ರೆಂಡ ಮೊದಲೇಬೇಕಿತ್ತೆನೋ ಅನಿಸದೆ ಇರಲ್ಲ ಈ ಸಿನೆಮಾ ನೊಡಿದ ಮೇಲೆ. ಅಷ್ಟಕ್ಕೂ ಸಿನೆಮಾ ಥೆಟರ್ ಹತ್ತಿರ ಕೂಡ ಸುಳಿಯದ ನನ್ನ ಸಹ ಉದ್ಯೌಗಿಯೊಬ್ಬರು ಸಿನೆಮಾ ಚನ್ನಾಗಿದೆ ಹೊಗಿಬಾ ಅಂತ ಹೇಳಿದಾಗಲ್ವಾ ನಾನು ಈ ಸಿನೆಮಾ ನೋಡಿದ್ದು. ತುಂಬಾ ಚನ್ನಾಗಿದೆ ಸಮಯ ಸಿಕ್ರೆ ಇನ್ನೊಮ್ಮೆ ನೋಡಿಕೊಂಡ ಬರ್ತಿನಿ ನಿವು ನೋಡಿ ಚನ್ನಾಗಿದ್ರೆ ಮತ್ತೊಮ್ಮೆ ನೋಡಿ ಪೈರಸಿ ಸಿಡಿಯಲ್ಲಲ್ಲ ಥೆಟರನಲ್ಲಿ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು